PR ನಾನು ಕೆಲಸವಿಲ್ಲದೆ ಸುಮ್ಮನೆ ಕುಳಿತರೂ ಯೋಚನೆಯಿಲ್ಲ. ರಿಯಾಲಿಟಿ ಶೋನಲ್ಲಿ ಮಾತ್ರ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ ಅಮಿಷಾ ಪಟೇಲ್. ಬಿಗ್ಬಾಸ್ 7ನಲ್ಲಿ ಅಮಿಷಾ ಪಾಲ್ಗೊಳ್ಳುತ್ತಾರೆ ಎಂಬ ಸುದ್ದಿ ಹರಡಿದ್ದಕ್ಕೆ ಆಕೆ ಸ್ವಲ್ಪ ಗರಂ ಆದಂತಿತ್ತು. ಶೋನಲ್ಲಿ ಕೆಲವರಿಗೆ ತಮ್ಮ ಖಾಸಗಿ ಬದುಕನ್ನು ತೆರೆ ಮುಂದೆ ತೋರಿಸುವ ಖಯಾಲಿ ಇರಬಹುದು. ಆದರೆ ನನಗೆ ಅದರ ಅಗತ್ಯವಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸುಮ್ಮನೆ ಕುಳಿತವರು ಇಂತಹ ವದಂತಿ ಹಬ್ಬಿಸುತ್ತಾರೆ, ಇದರತ್ತ ಹೆಚ್ಚು ಗಮನ ಕೊಡಬೇಡಿ