PR ಬಿಗ್ಬಾಸ್ ಸೀಸನ್ 7 ಕಲಸರ್್ ವಾಹಿನಿಯಲ್ಲಿ ಕೊನೆಗೂ ಆರಂಭವಾಗಿದೆ. ಸಲ್ಮಾನ್ ಖಾನ್ ನಿರೂಪಣೆಯ ಈ ಕಾರ್ಯಕ್ರಮದ ಮೊದಲ ಕಂತು ಪ್ರೇಕ್ಷಕರನ್ನು ರಂಜಿಸುವಲ್ಲಿ ಹಾಗೂ ಕುತೂಹಲದಿಂದ ವೀಕ್ಷಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕಾಮ್ಯಾ ಪಂಜಾಬಿ, ಗೌಹರ್ ಖಾನ್, ಹವೇಲ್ ಕೀಚ್, ಸಂಗ್ರಾಮ್ ಸಿಂಗ್, ಅಅಮ್ರಾನ್, ಅಪೂರ್ವ-ಶಿಲ್ಪಾ ಅಗ್ನಿಹೋತ್ರಿ, ಎಲಿ ಆವ್ರಾಮ್, ವಿಜೆ ಆಂಡಿ, ಪ್ರತ್ಯೂಷಾ ಬ್ಯಾನರ್ಜಿ, ರಜತ್ ರವೈಲ್, ಅನಿತಾ, ತನಿಶಾ, ಕುಶಲ್ ಹೀಗೆ ಪ್ರತಿಯೊಬ್ಬರೂ ಪ್ರೇಕ್ಷಕರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.