PR ಬೆಂಗಳೂರಿನ ಬಾಲೆ ಅಂಜನಾ ಪದ್ಮನಾಭನ್ ಈ ಬಾರಿಯ ಇಂಡಿಯನ್ ಐಡಲ್ ಜ್ಯೂನಿಯರ್ ಆಗಿ ಹೊರಹೊಮ್ಮಿದ್ದಾರೆ. ಸರಾಗವಾಗಿ ಹಿಂದಿ ಮಾತನಾಡಲು ಬಾರದಿದ್ದರೂ ಸ್ಪಷ್ಟವಾಗಿ ಶೃತಿಬದ್ದವಾಗಿ ಹಾಡಿ ಸರಾಗವಾಗಿ ಪ್ರಶಸ್ತಿಯನ್ನು ತನ್ನ ಬಗಲಿಗೆ ಹಾಕಿಕೊಂಡಿದ್ದಾಳೆ. ದೇಶದ ನಾಲ್ಕು ವಲಯಗಳಿಂದ ನಾಲ್ಕು ಸ್ಪರ್ಧೆಗಳು ಪಾಲ್ಗೊಂಡಿದ್ದರು. ಉತ್ತರ ವಲಯದಿಂದ ಜಮ್ಮು ಮತ್ತು ಕಾಶ್ಮೀರದಿಂದ ಅನ್ಮೋಲ್ ಜೈಸ್ವಾಲ್, ದಕ್ಷಿಣ ವಲಯದಿಂದ ಬೆಂಗಳೂರಿನಿಂದ ಅಂಜನಾ, ಪೂರ್ವ ವಲಯದಿಂದ ಪಶ್ಚಿಮ ಬಂಗಾಳದ ದೇಬಾಂಜನಾ ಕರ್ಮಾಕರ್ ಹಾಗೂ ಪಶ್ಚಿಮ ವಲಯದಿಂದ