PR ಬೇಶರಮ್ ಚಿತ್ರದಲ್ಲಿ ಮೊದಲ ಬಾರಿಗೆ ಇಡೀ ಕುಟುಂಬವೊಂದು ಸಿನೆಮಾದಲ್ಲಿ ಕಾಣಿಸಿಕೊಂಡಿದೆ. ಇಲ್ಲಿ ರಿಷಿ ಕಪೂರ್, ಪತ್ನಿ ನೀತೂ ಸಿಂಗ್ ಹಾಗೂ ಮಗ ರಣಬೀರ್ ಕಪೂರ್ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ನೀತು ಸಿಂಗ್ ತನ್ನ ಮಗ ರಣಬೀರ್ ಜೊತೆ ಸೇರಿ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾರೆ. ಮಗನ ವೈವಿಧ್ಯಮಯ ಪಾತ್ರಗಳನ್ನು ನೀತು ಮುಕ್ತವಾಗಿ ಹೊಗಳುತ್ತಿದ್ದಾರೆ. ನನ್ನ ಮಗನ ಕೆಲಸ ನೋಡಿದರೆ ಸಂತಸವಾಗುತ್ತದೆ. ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವುದನ್ನು ನೋಡಲು ಹೆಮ್ಮೆ ಎನಿಸುತ್ತದೆ