ಲಾಕ್ಮೆ ವರ್ಷಕ್ಕೊಮ್ಮೆ ಫ್ಯಾಶನ್ ವೀಕ್ ಏರ್ಪಡಿಸಿ ಬಾಲಿವುಡ್ ಅಗ್ರಗಣ್ಯ ಮಾಡೆಲ್ಗಳನ್ನು ರ್ಯಾಂಪ್ ಮೇಲೆ ನಡೆಸುವುದು ಪ್ರತೀ ಬಾರಿಯೂ ನಡೆಯುತ್ತಿದೆ. ಅದರಂತೆ ಈ ಬಾರಿ ಮುಂಬೈನ ಪ್ರತಿಷ್ಠಿತ ಲಾಕ್ಮಿ ಫ್ಯಾಶನ್ ವೀಕ್ನಲ್ಲಿ ಬಾಲಿವುಡ್ನ ಬಹುತೇಕ ನಟ ನಟಿಯರು ಸೊಂಟ ಬಳುಕಿಸುತ್ತಾ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ನ ಸಿನಿಕುಟುಂಬಕ್ಕೂ ಫ್ಯಾಶನ್ ಲೋಕಕ್ಕೂ ಬಿಡಿಸಲಾರದ ನಂಟಿದೆ. ಸಾಮಾಜಿಕ ಕಾರ್ಯಕರ್ತರು ವಿಶೇಷ ಚೇತನದ ಮಕ್ಕಳೊಂದಿಗೆ ಬೆಕ್ಕಿನ ನಡಿಗೆ ಇಡುವುದು, ಹುಲಿ ಉಳಿಸಿ ಅಭಿಯಾನ ಸೇರಿದಂತೆ ಅನೇಕ ಸಂದೇಶ