ಶಾರೂಖ್ ಖಾನ್ ಇದೇ ಮೊದಲ ಬಾರಿಗೆ ಮಗುವಿನ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಸುಳಿದಾಡುತ್ತಿದ್ದ ಹತ್ತಾರು ಗಾಸಿಪ್ಗಳಿಗೆ ತೆರೆ ಬಿದ್ದಿದೆ. ಅವರ ಮಾತನ್ನೇ ಕೇಳುವುದಾದರೆ...ಅವಧಿಗೂ ಮುನ್ನವೇ ನಮ್ಮ ಮಗ ಅಬ್ರಾಂ ಹುಟ್ಟಿದ. ಹೀಗಾಗಿ ಆತನ ಆರೋಗ್ಯ ಸ್ಥಿರವಾಗಿರಲಿಲ್ಲ. ಅದಕ್ಕಾಗಿ ಮಗುವನ್ನು ಇಂಟೆನ್ಸಿವ್ ಕೇರ್ನಲ್ಲಿಟ್ಟು ನೋಡಿಕೊಳ್ಳಲಾಗುತ್ತಿತ್ತು. ಕೆಲವು ತಿಂಗಳು ಅಲ್ಲಿದ್ದ ಮಗು ಈಗ ನಮ್ಮ ಮನೆಗೆ ಬಂದಿದೆ. ಅದನ್ನು ಚೆನ್ನಾಗಿ ನೋಡಿಕೊಂಡ ವೈದ್ಯ ಜತೀನ್ ಶಾ ಹಾಗೂ ಅಲ್ಲಿನ ಎಲ್ಲಾ ಸಿಬ್ಬಂದಿಗೆ