PR ರಾಮ್ಲೀಲಾ ಚಿತ್ರದ ಐಟಂ ಹಾಡೊಂದು ಮಾಡಿದಷ್ಟು ಸುದ್ದಿ ಯಾವ ಚಿತ್ರದ ಹಾಡುಗಳೂ ಮಾಡಿರಲಿಕ್ಕಿಲ್ಲವೇನೋ? ಆ ರೋಲ್ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಎರಡು ತಿಂಗಳಿನಿಂದ ಗಾಸಿಪ್ಗಳು ಹರಿದಾಡುತ್ತಲೇ ಇವೆ. ಸಂಜಯ್ ಲೀಲಾ ಬನ್ಸಾಲಿ ಈ ಚಿತ್ರದ ಮೂಲಕ ಐಶ್ವರ್ಯಾ ರೈ ಅವರನ್ನು ಮತ್ತೆ ಬೆಳ್ಳಿತೆರೆಗೆ ಕರೆತರಲಿದ್ದಾರೆ ಎಂದು ಹೇಳಲಾಗಿತ್ತು. ಅದನ್ನು ನಿರ್ದೇಶಕರ ಸಹಿತ ಐಶ್ವರ್ಯಾ ಕುಟುಂಬದ ಆಪ್ತರು ಸುಳ್ಳೆಂದಿದ್ದೂ ಆಯಿತು. ಕೊನೆಗೂ ಆ ನೃತ್ಯಕ್ಕೆ ಹೆಜ್ಜೆ ಹಾಕಲು ಪ್ರಿಯಾಂಕಾ