PRPR ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಗೌರವಾನ್ವಿತ ಯಶ್ ಚೋಪ್ರಾ ಸ್ಮಾರಕ ಅವಾರ್ಡ್ ದೊರೆತಿದೆ. ಶನಿವಾರ ರಾತ್ರಿ ಮುಂಬೈನಲ್ಲಿ ಕೇಂದ್ರ ಇನ್ಫರಮೇಷನ್ ಮತ್ತು ಬ್ರಾಡ್ ಕಾಸ್ಟಿಂಗ್ ಮಂತ್ರಿ ಮನೀಷ್ ತಿವಾರಿ ಅವರು ಕಾರ್ಯಕ್ರಮ ಒಂದರಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಸಿದ್ಧ ನಿರ್ದೇಶಕ -ನಿರ್ಮಾಪಕ ಯಶ್ ಚೋಪ್ರಾ ಸ್ಮರಣಾರ್ಥ ಟಿಎಸ್ಸಾರ್ ಫೌಂಡೇಷನ್ ಪರವಾಗಿ ಕಾಂಗ್ರೆಸ್ ಅಧಿನಾಯಕರಲ್ಲಿ ಒಬ್ಬರಾದ ಟಿ. ಸುಬ್ಬರಾಮಿರೆಡ್ಡಿ ಈ ಅವಾರ್ಡ್ ಕಾರ್ಯಕ್ರಮದ ಮುಖ್ಯಸ್ಥಿಕೆ ವಹಿಸಿ ಕೊಂಡಿದ್ದರು.