PR ಬರ್ಫಿ ಚಿತ್ರದಲ್ಲಿ ರಣಬೀರ್ ಜೊತೆ ಇಲಿಯಾನಾ ನಟಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಅವರಿಬ್ಬರ ಕೆಮಿಸ್ಟ್ರಿ ಬಾಲಿವುಡ್ನಲ್ಲಿ ಚೆನ್ನಾಗಿ ವರ್ಕೌಟ್ ಆಗಿತ್ತು. ಆ ಬಳಿಕ ಇಲಿಯಾನಾ ಅವರ ಬಾಲಿವುಡ್ ಜರ್ನಿ ಮುಂದುವರೆದಿದೆ. ಅದೂ ಯಂಗ್ಸ್ಟರ್ಗಳೊಂದಿಗೆ. ಈ ಬಾರಿ ಅವರು ಜೋಡಿಯಾಗಿದ್ದು ಚಾಕೊಲೇಟ್ ಬಾಯ್ ಶಾಹಿದ್ ಕಪೂರ್ ಅವರೊಂದಿಗೆ. ಶಾಹಿದ್ ಜೊತೆ ನಟಿಸಿದ್ದು ನನಗಂತೂ ಸಖತ್ ಖುಷಿ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.ಚಿತ್ರದಲ್ಲಿ ಶಾಹಿದ್ ರೋಲ್ ಚೆನ್ನಾಗಿದ್ದು, ನಮ್ಮಿಬ್ಬರ ಕೆಮಿಸ್ಟ್ರಿಯೂ ಚೆನ್ನಾಗಿದೆ.