PR ಬಾಲಿವುಡ್ನಲ್ಲಿ ಹೊಸತೊಂದು ಸುದ್ದಿ ಕೇಳಿಬರುತ್ತಿದೆ. ಸುಮಾರು ಒಂದು ದಶಕದ ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸಿದ್ದ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸುಜಾನೆ ರೋಷನ್ ಮಧ್ಯೆ ಭಿನ್ನಾಭಿಪ್ರಾಯಗಳು ತೋರಿದ್ದು ವಿಚ್ಚೇದನಕ್ಕಾಗಿ ಸಿದ್ದತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಹೃತಿಕ್ ರೋಷನ್ ಹೊರಗಡೆಯ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಪತ್ನಿ ಸುಜಾನೆಗೆ ಅಸಮಾಧಾನ ತಂದಿದೆ. ಪರಸ್ಪರರು ಮುಖಾಮುಖಿಯಾಗಿ ಮಾತನಾಡಲು ಕೂಡಾ ಬಯಸದ ಮಟ್ಟಿಗೆ ಭಿನ್ನಾಭಿಪ್ರಾಯಗಳು ಮೂಡಿವೆ ಎನ್ನಲಾಗಿದೆ.ಇದಕ್ಕಿಂತ ಕೆಲ ದಿನಗಳ