PR ವಿದೇಶಿಯರು ನಮ್ಮ ಬಗ್ಗೆ ಒಂದೊಳ್ಳೆ ಅಭಿಪ್ರಾಯ ಹೊಂದುವುದೇ ಕಷ್ಟದ ಕೆಲಸ ಆಗಿರುವಾಗ ನಮ್ಮ ದೇಶದ ಸಾಧಕರೊಬ್ಬರ ಹೆಸರನ್ನು ವಿದೇಶದ ರಸ್ತೆಯೊಂದಕ್ಕೆ ಇಡುವುದು ಅಂದ್ರೆ ನಿಜಕ್ಕೂ ಹೆಮ್ಮೆ ತರುವ ಸಂಗತಿ. ಇದು ಆಸ್ಕರ್ ಪ್ರಶಸ್ತಿಗಿಂತ ಹೆಚ್ಚಿನ ಮಹತ್ವ ಪಡೆದಿದೆ. ಅಂತಹ ಸೌಭಾಗ್ಯ ತಮ್ಮದಾಗಿಸಿಕೊಂಡವರು ನಮ್ಮ ಎ.ಆರ್. ರೆಹಮಾನ್. ಕೆನಡ ದೇಶದ ಒಂತಾರಿಯಾದ ಮರ್ಖಂ ನಗರದ ಒಂದು ರಸ್ತೆಗೆ ಅಲ್ಲಾ-ರಖಾ-ರೆಹಮಾನ್ ಎನ್ನುವ ಹೆಸರನ್ನು ಇಡಲಾಗಿದೆ. ಇದು ರೆಹಮಾನ್ ಅವರ ಪೂರ್ತಿ ಹೆಸರು