PR ಸಿನೆಮಾ ತಾರೆಯರ ಸೌಂದರ್ಯವೇ ಅಂತಹುದು. ಅವರ ಚಿತ್ರ ನೋಡಿ ವಯಸ್ಸು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಮುದ್ದು ಮುದ್ದಾಗಿ ಎರಡು ಮಕ್ಕಳ ತಾಯಿಯಾಗಿ ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೀದೇವಿ ವಯಸ್ಸು ಐವತ್ತು ದಾಟಿದೆ ಎಂದರೆ ನಂಬುವುದು ಅಷ್ಟು ಸುಲಭವೇ.ಇಬ್ಬರು ಮಕ್ಕಳು ಹೀರೋಯಿನ್ಗಳಾಗಿ ಬೆಳ್ಳಿತೆರೆಗೆ ಪರಿಚಯವಾಗುವ ವಯಸ್ಸಿನಲ್ಲಿ ತಾಯಿ ತುಂಡುಡುಗೆ ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರೆ ಹೇಗಿರಬಹುದು. ಶ್ರೀದೇವಿ ಮಾಡಿದ್ದು ಇದನ್ನೇ. ವೋಗ್ ಇಂಡಿಯಾ ಎಂಬ ನಿಯತಕಾಲಿಕೆಯಲ್ಲಿ