PTI ಶೋಲೆ ಚಿತ್ರ ಚಲನಚಿತ್ರದ ಇತಿಹಾಸದಲ್ಲಿ ಮೈಲಿಗಲ್ಲು ಮೂಡಿಸಿದ ರೀತಿಯೇ ಅಂತಹುದು. ಬಿಡುಗಡೆಯಾಗಿ 38 ವರ್ಷಗಳ ಬಳಿಕವೂ ಅದೇ ಕ್ರೇಜ್ ಉಳಿಸಿಕೊಂಡು, ಒಮ್ಮೆ ನೋಡಿದರೆ ಮರೆಯಲಾಗದ ಅನುಭವ ನೀಡುವ ಚಿತ್ರ ಶೋಲೆ. ಮೂರು ವರ್ಷಗಳ ಕಾಲ ಒಂದೇ ಚಿತ್ರಮಂದಿರದಲ್ಲಿ ಓಡುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿತ್ತು. ಅದೇ ಶೋಲೆ ಚಿತ್ರವನ್ನು ತ್ರಿಡಿಯಲ್ಲಿ ತರುವ ಪ್ರಯತ್ನ ಬಹುತೇಕ ಪೂರ್ಣಗೊಂಡಿದೆ. ಇದೇ ಆಗಸ್ಟ್ 15ರಂದು ಶೋಲೆ ಚಿತ್ರದ ತ್ರಿಡಿ ಪ್ರದರ್ಶನ ದೇಶದಾದ್ಯಂತ ತೆರೆಕಾಣಲಿದೆ.