PR ಸ್ಮಗ್ಲರ್ ಚಿತ್ರದ ಮುಹೂರ್ತವನ್ನು ಸಖತ್ ಗ್ರ್ಯಾಂಡ್ ಆಗಿ ಮಾಡಿದ್ದ ಪ್ರಿಯಾ ಹಾಸನ್ ಒಂದಷ್ಟು ದಿನ ಮಾಧ್ಯಮದ ಮುಂದೆ ಕಾಣಿಸಿಕೊಂಡಿರಲಿಲ್ಲ. ಸ್ಮಗ್ಲರ್ ಕಥೆ ಏನಾಯ್ತು, ಎಲ್ಲಿ ತನಕ ಬಂತು ಎಂದು ಕೇಳುವವರಿಗೆ ಈ ಜಂಭದ ಹುಡುಗಿ ಭರ್ಜರಿ ರಿ ಎಂಟ್ರಿ ಕೊಡಲು ತಯಾರಾಗಿದ್ದಾರೆ. ಶನಿವಾರವಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾ ಹಾಸನ್ ಮತ್ತೆ ಬ್ಯಾಂಕಾಕ್ನತ್ತ ಪ್ರಯಾಣ ಬೆಳೆಸಲು ತಯಾರಾಗಿದ್ದಾರೆ. ಅದು ತಮ್ಮ ಸ್ಮಗ್ಲರ್ ಚಿತ್ರದ ಹಾಡುಗಳ ಚಿತ್ರೀಕರಣಕ್ಕಾಗಿ.ಪ್ರಿಯಾ ಹಾಸನ್ ನಟಿಸುತ್ತಿರುವ ಸ್ಮಗ್ಲರ್