PR ಧೂಂ3 ರ ನಿರ್ಮಾಣ ಸಂಸ್ಥೆ ಛೋಟಾ ಬಚ್ಚನ್ ಅಭಿಷೇಕ್ ಬಳಿ ಕ್ಷಮೆ ಯಾಚಿಸಿದೆ. ಇದೇನು ಹೀಗಿದೆ ಸುದ್ದಿ ಅನ್ನುವ ಕುತೂಹಲ ನಿಮ್ಮಲ್ಲಿ ಮೂಡುವುದು ಸಹಜ. ಧೂಂ3ನಲ್ಲಿ ನಟ ಅಭಿಷೇಕ್ ಬಚ್ಚನ್ ಸಹ ಹೀರೋಗಳಲ್ಲಿ ಒಬ್ಬರಾಗಿ ನಟಿಸುತ್ತಿದ್ದಾರೆ. ಹಾಗಾದರೆ ಅವರ ಬಳಿ ಯಾಕೆ ಕ್ಷಮಾಪಣೆ ಯಾಚಿಸಿದೆ ಆ ಪ್ರೊಡಕ್ಷನ್ ಹೌಸ್ ಎನ್ನುವ ಆಶ್ಚರ್ಯ ಮೂಡುವುದು ಸಹಜ. ನಿಮಗೆಲ್ಲರಿಗೂ ಗೊತ್ತಿರುವಂತೆ ಧೂಂ3ರ ಬಗ್ಗೆ ದಿನಕ್ಕೊಂದು ಹೊಸ ಬಗೆಯ ವಾರ್ತೆಗಳು ಕೇಳಿ ಬರುತ್ತಿವೆ.