PR ಶರ್ಮಿಳಾ ಠಾಗೂರ್ ಮಗಳು ಸೋಹಾ ಆಲಿ ಖಾನ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ಗೊತ್ತಿಲ್ಲದ ಸಂಗತಿಯೆಂದರೆ ತಾಯಿಗೆ ಮಗಳು ಕಪ್ಪು ಕೋಟು ಧರಿಸಿ ಕೈಯಲ್ಲಿ ಫೈಲ್ ಹಿಡಿದು ಓಡಾಡುವ ಲಾಯರ್ ಆಗಬೇಕು ಎಂಬ ಕನಸಿತ್ತಂತೆ. ಇಷ್ಟಕ್ಕೂ ಸೋಹಾ ಓದಿದ್ದು ಲಂಡನ್ ಶಾಲೆಯಲ್ಲಿ. ಅಲ್ಲಿ ಅವರು ಎಕನಾಮಿಕ್ಸ್ ಮತ್ತು ಪಾಲಿಟಿಕಲ್ ಸೈನ್ಸ್ನಲ್ಲಿ ಪದವಿ ಪಡೆದಿದ್ದಾರೆ. ಭಾರತಕ್ಕೆ ಮರಳಿದ ಬಳಿಕ ಲಾಯರ್ ಆಗುತ್ತೇನೆ ಎಂದು ಸ್ವತಃ ಸೋಹಾ ಅವರೇ ಹೇಳಿದ್ದರಂತೆ.