PR ಬಹಳ ದಿನಗಳಿಂದ ಸಣ್ಣ ಮಟ್ಟದಲ್ಲಿ ಕೇಳಿ ಬರುತ್ತಿದ್ದ ಸುದ್ದಿ ಅಂದರೆ ಹೃತಿಕ್ ಮತ್ತು ಸೂಸಾನ್ ಕುಟುಂಬದಲ್ಲಿ ಲಯ ತಪ್ಪಿದೆ. ಅವರಿಬ್ಬರೂ ಬೇರೆ ಆಗುತ್ತಿದ್ದಾರೆ. ಚಿತ್ರರಂಗದ ಯಶಸ್ವಿ ನಾಯಕ ಹೃತಿಕ್ ರೋಶನ್ ನಟ ಸಂಜಯ್ ಖಾನ್ ಮಗಳ ನ್ನು ಪ್ರೀತಿಸಿ ಮದುವೆಯಾಗಿದ್ದರು. 20 ಡಿಸೆಂಬರ್ 2000ರಲ್ಲಿ ಬಾಳ ಸಂಗಾತಿಗಳಾದ ಜೋಡಿ 14 ವರ್ಷಗಳ ನಂತರ ಬೇರೆ ಆಗಲು ನಿರ್ಧರಿಸಿದ್ದಾರೆ ಎನ್ನುವುದು ಈಗ ಬಿ ಟೌನ್ ನಲ್ಲಿ ಓಡಾಡುತ್ತಿರುವ ಹಸಿಬಿಸಿ ಸುದ್ದಿ.