ಲಡಾಖ್ ನಲ್ಲಿ ಶೂಟಿಂಗ್ ಮಾಡಿ ವಿವಾದಕ್ಕೀಡಾದ ಅಮೀರ್ ಖಾನ್

ನವದೆಹಲಿ| Krishnaveni K| Last Modified ಮಂಗಳವಾರ, 13 ಜುಲೈ 2021 (11:21 IST)
ನವದೆಹಲಿ: ಲಡಾಖ್ ನಲ್ಲಿ ತಮ್ಮ ಲಾಲ್ ಸಿಂಗ್ ಛಡ್ಡಾ ಸಿನಿಮಾ ಶೂಟಿಂಗ್ ಮಾಡಲು ಹೊರಟ ಬಾಲಿವುಡ್ ನಟ ಅಮೀರ್ ಖಾನ್ ಮತ್ತು ತಂಡ ಈಗ ವಿವಾದಕ್ಕೀಡಾಗಿದೆ.
 

ಅಮೀರ್ ಖಾನ್ ಮತ್ತು ತಂಡ ಇಲ್ಲಿ ಫೋಟೋಗೆ ಪೋಸ್ ನೀಡಿದ್ದು ಭಾರೀ ವೈರಲ್ ಆಗಿತ್ತು. ಇಲ್ಲಿ ಯುದ್ಧದ ಸನ್ನಿವೇಶವೊಂದನ್ನು ಚಿತ್ರತಂಡ ಚಿತ್ರೀಕರಣ ನಡೆಸಿದೆ ಎನ್ನಲಾಗಿದೆ.
 
ಆದರೆ ಚಿತ್ರೀಕರಣ ವೇಳೆ ಚಿತ್ರತಂಡ ಇಲ್ಲಿ ಪ್ಲಾಸ್ಟಿಕ್ ಬಾಟಲಿ, ಕಸ ಕಡ್ಡಿ ಎಸೆದು ಸುಂದರ ಸ್ಥಳವನ್ನು ಗಲೀಜು ಮಾಡಿದೆ ಎಂದು ಟ್ವಿಟರಿಗರೊಬ್ಬರು ವಿಡಿಯೋ ಸಮೇತ ಆಪಾದಿಸಿದ್ದಾರೆ. ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿ ಬಗ್ಗೆ ಭಾಷಣ ಬಿಗಿಯುವ ಅಮೀರ್ ರಿಂದ ಈ ಕೊಡುಗೆ ಎಂದು ಟ್ವಿಟರಿಗ ಆಪಾದಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :