Widgets Magazine

ಈ ಬಾಲಕಿ ಮಾಡಿದ ಚಿತ್ರಕ್ಕೆ 1 ಲಕ್ಷ ರೂ. ಕೊಟ್ಟು ಖರೀದಿಸಿದ ಅಭಿಷೇಕ್ ಬಚ್ಚನ್!

ಮುಂಬೈ| Krishnaveni K| Last Modified ಮಂಗಳವಾರ, 28 ಏಪ್ರಿಲ್ 2020 (09:47 IST)
ಮುಂಬೈ: ಬಾಲಿವುಡ್ ನಿರ್ಮಾಪಕಿ ಫರಾ ಖಾನ್ ಮಗಳು ಅನ್ಯಾ ಮಾಡಿದ ಪ್ರಾಣಿಯ ಚಿತ್ರವೊಂದಕ್ಕೆ 1 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಅಷ್ಟಕ್ಕೂ ಈ ಚಿತ್ರದಲ್ಲಿ ಅಂತಹ ವಿಶೇಷತೆ ಏನಿದೆ ಗೊತ್ತಾ?

 

12 ವರ್ಷದ ಪುಟಾಣಿ ಅನ್ಯಾ ನಾಯಿಯ ಪೆನ್ಸಿಲ್ ಸ್ಕೆಚ್ ಮಾಡಿದ್ದಳು. ಈ ಚಿತ್ರಕ್ಕೆ ಅಭಿಷೇಕ್ 1 ಲಕ್ಷದ 1 ಸಾವಿರ ರೂ. ಕೊಟ್ಟು ಖರೀದಿ ಮಾಡಿದ್ದಾರೆ. ಈ ಮೊತ್ತವನ್ನು ಪ್ರಾಣಿಗಳಿಗೆ ಆಹಾರ ಪೂರೈಸಲು ದೇಣಿಗೆಯಾಗಿ ಬಳಸಲಾಗುತ್ತದೆ. ಅದೇ ಕಾರಣಕ್ಕೆ ಅಭಿಷೇಕ್ ಇಷ್ಟೊಂದು ದುಬಾರಿ ಮೊತ್ತ ನೀಡಿದ್ದಾರೆ.
 
ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಫರಾ ಖಾನ್ ಅಭಿಷೇಕ್ ಬಚ್ಚನ್ ಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :