ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಶೂಟಿಂಗ್ ವೇಳೆ ಅವಘಡವಾಗಿದ್ದು ಕಾಲು ಮುರಿದುಕೊಂಡಿದ್ದಾರೆ.ಈ ವಿಚಾರವನ್ನು ಖುದ್ದಾಗಿ ಅವರೇ ಸೋಷಿಯಲ್ ಮೀಡಿಯಾ ಮೂಲಕ ಫೋಟೋ ಸಹಿತ ಹಂಚಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ‘ ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸೀರೀಸ್ ಚಿತ್ರೀಕರಣದ ವೇಳೆ ಘಟನೆ ನಡೆದಿದೆ.ಘಟನೆಯಲ್ಲಿ ಶಿಲ್ಪಾ ಶೆಟ್ಟಿ ಎಡಕಾಲಿನ ಮೂಳೆ ಮುರಿತವಾಗಿದ್ದು ಇನ್ನು ಆರು ವಾರಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ.