ನವದೆಹಲಿ: ನಟ ಅನುಪಮ್ ಖೇರ್ ಅವರು ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿರುವ ಕೆಲವು ಸ್ನೇಹಿತರು ಈ ಬಗ್ಗೆ ಮಾಹಿತಿ ನೀಡಿದರು. ಈ ಕುರಿತು ಟ್ವಿಟರ್ಗೆ ದೂರು ನೀಡಿದ್ದೇನೆ ಎಂದು ಸದ್ಯ ಲಾಸ್ ಏಂಜಲೀಸ್ನಲ್ಲಿರುವ ಅವರು ಹೇಳಿದ್ದಾರೆ.