ನಟ ಸಿದ್ದಾರ್ಥ್ ಶುಕ್ಲಾ ಪಯಣಿಸುತ್ತಿದ್ದ ಕಾರು ಅಪಘಾತ!

ಮುಂಬೈ| pavithra| Last Modified ಭಾನುವಾರ, 22 ಜುಲೈ 2018 (07:38 IST)
ಮುಂಬೈ : ನಟ ಸಿದ್ದಾರ್ಥ್ ಶುಕ್ಲಾ ಅವರ ಬಿಎಂಡಬ್ಲ್ಯೂ ಕಾರು ಸಂಜೆ ಅಪಘಾತಕ್ಕೀಡಾಗಿದ್ದು, ಸದ್ಯ ನಟ ಯಾವುದೇ ತೊಂದರೆಯಾಗದೇ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


ಮಾಹಿತಿ ಪ್ರಕಾರ ನಟ ಸಿದ್ಧಾರ್ಥ್ ಅವರು ಶನಿವಾರ ಸಂಜೆ ಆರು ಗಂಟೆ ಸುಮಾರಿಗೆ ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಶ್ರೀಜಿ ಹೋಟೆಲ್ ಬಳಿ ಸಾಗುತ್ತಿದ್ದರು. ಈ ಸಮಯದಲ್ಲಿ ಕಾರಿನ ನಿಯಂತ್ರಣ ತಪ್ಪಿ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ಕೊನೆಗೆ ಡಿವೈಡರ್ ಗೆ ಗುದ್ದಿದೆ. ಇದರಿಂದ ನಟಿನಿಗೆ ಯಾವುದೇ ತೊಂದರೆಯಾಗದೇ ಪಾರಾಗಿದ್ದು, ಆದರೆ ಇತರ ವಾಹನಗಳಲ್ಲಿದ್ದ ವ್ಯಕ್ತಿಗಳಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


ಸಿದ್ದಾರ್ಥ್ ಶುಕ್ಲ ದಿಲ್ ಸೆ ದಿಲ್ ತಕ್ , ಆಹಟ್, ಬಾಲಿಕಾ ವಧು, ಖತರೋಂಕಿ ಖಿಲಾಡಿ, ಕಾಮೆಡಿ ಕ್ಲಾಸಸ್ ಮತ್ತು ಹಿಂದಿ ಚಿತ್ರ ಹಮ್ ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ನಟಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :