Widgets Magazine

ಸ್ವಂತ ಖರ್ಚಿನಲ್ಲಿ ಕರ್ನಾಟಕದ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟ ಬಾಲಿವುಡ್ ನಟ ಸೋನು ಸೂದ್

ಮುಂಬೈ| Krishnaveni K| Last Modified ಬುಧವಾರ, 13 ಮೇ 2020 (09:24 IST)
ಮುಂಬೈ: ಬಾಲಿವುಡ್ ನಟ ಸೋನು ಸೂದ್ ತೆರೆ ಮೇಲೆ ವಿಲನ್ ಪಾತ್ರಧಾರಿಯಾಗಿ ಮಿಂಚಿರಬಹುದು. ಆದರೆ ನಿಜ ಜೀವನದಲ್ಲಿ ತಾವು ಹೀರೋ ಎನ್ನುವುದನ್ನು ಈಗ ನಿರೂಪಿಸಿದ್ದಾರೆ.
 

ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿ ಇಲ್ಲಿನ ಜನರಿಗೆ ಚಿರಪರಿಚಿತವಾಗಿರುವ ಸೋನು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತೆರಳಬೇಕಿದ್ದ ಸುಮಾರು 350 ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟು ತವರಿಗೆ ಬೀಳ್ಕೊಟ್ಟಿದ್ದಾರೆ.
 
ಖುದ್ದಾಗಿ ತಾವೇ ವಿಶೇಷ ಬಸ್ ವ್ಯವಸ್ಥೆ ಮಾಡಿಸಿದ್ದಲ್ಲದೆ, ತಾವೇ ಮುಂದೆ ನಿಂತು ಕಾರ್ಮಿಕರನ್ನು ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ತಾವು ನಿಜ ಜೀವನದ ಹೀರೋ ಎಂದು ಸಾಬೀತುಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :