ಮುಂಬೈ : ಈ ಹಿಂದೆ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ ಚಿತ್ರದಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ತನ್ನನ್ನು 7 ಬಾರಿ ನಗ್ನವಾಗಿ ಚಿತ್ರಿಕರಿಸಿದ್ದಾರೆ ಎಂದು ಹೇಳಿದ ನಟಿ ಕುಬ್ರಾ ಅವರು ಇದೀಗ ಮತ್ತೊಂದು ಆಸಕ್ತಿದಾಯಕ ವಿಷ್ಯವನ್ನು ಹೇಳಿದ್ದಾರೆ. ಸೈಫ್ ಅಲಿ ಖಾನ್ ಹಾಗೂ ನವಾಝುದ್ದೀನ್ ಸಿದ್ದಿಕಿ ಅಭಿನಯದ ವೆಬ್ ಸರಣಿ ಸೇಕ್ರೆಡ್ ಗೇಮ್ಸ್ ಚಿತ್ರದಲ್ಲಿ ನಟಿ ಕುಬ್ರಾ ಟ್ರಾನ್ಸ್ಜೆಂಡರ್ ಪಾತ್ರದಲ್ಲಿ ನಟಿಸಿದ್ದರು. ಇದರಿಂದ ಅನೇಕರು ಇವರನ್ನು ಮಂಗಳಮುಖಿ ಎಂದೇ ನಂಬಿದ್ದಾರಂತೆ.