ಟೊರೊಂಟೊ : ಬಹುಭಾಷಾ ನಟಿ ರಂಭಾ ಅವರು ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಪತಿ ಇಂದ್ರನ್ ಪಥ್ಮನಾಥಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಟಿ ರಂಭಾ ಕೆಲವು ತಿಂಗಳುಗಳ ಹಿಂದೆ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದರು. ಇದಕ್ಕೆ ಸಂಬಂಧಪಟ್ಟ ಫೊಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಸೆಪ್ಟೆಂಬರ್ 23 ರಂದು ಟೊರೊಂಟೊದ ಮೌಂಟ್ ಸಿನೈ ಆಸ್ಪತ್ರೆಯಲ್ಲಿ ನಟಿ ರಂಭಾ ಅವರು ಗಂಡು ಮಗುವಿಗೆ