ಮುಂಬೈ : ಯಾವಾಗಲೂ ವಿವಾದದ ಮೂಲಕವೇ ಸುದ್ಧಿಯಾಗುತ್ತಿರುವ ನಟಿ ಸೋಫಿಯಾ ಹಯಾತ್ ಇದೀಗ ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟಿ ಸೋಫಿಯಾ ಹಯಾತ್ ಎಲ್ಲವನ್ನು ತ್ಯಜಿಸಿ ಸನ್ಯಾಸಿಯಾಗಿ ಸುದ್ದಿಯಾಗಿದ್ದರು. ಆದರೆ ಇದೀಗ ಧರ್ಮಕ್ಕೆ ಅಪಮಾನ ಮಾಡಿದ ವಿಚಾರಕ್ಕೆ ಮತ್ತೆ ಸುದ್ಧಿಯಾಗಿದ್ದಾರೆ. ಹೌದು, ಮಾಜಿ ಬಿಗ್ಬಾಸ್ ಸ್ಪರ್ಧಿ ಸೋಫಿಯಾ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಅವರ ಕಾಲುಗಳು ಮಾತ್ರ ಕಾಣಿಸುತ್ತವೆ. ಆದರೆ, ಅವರ ಅಂಗಾಲಿನಲ್ಲಿ ಸ್ವಸ್ತಿಕ್ ಚಿಹ್ನೆಯ ಟ್ಯಾಟೂ