ಹೈದರಾಬಾದ್ : ಇತ್ತೀಚೆಗಷ್ಟೇ ತೆಲುಗು ನಟಿ ಶ್ರೀರೆಡ್ಡಿ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಅರೆಬೆತ್ತಲೆಯಾಗಿ ಫಿಲ್ಮಂ ಚೇಬರ್ ಮುಂದೆ ಪ್ರತಿಭಟನೆ ಮಾಡಿರುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಖ್ಯಾತ ನಿರ್ಮಾಪಕರೊಬ್ಬರ ಮಗ ತನ್ನನ್ನು ದೈಹಿಕವಾಗಿ ಬಳಸಿಕೊಂಡು ವಚನೆ ಮಾಡಿರುವುದಾಗಿ ಸಾಕ್ಷಿ ಸಮೇತ ಲೀಕ್ ಮಾಡಿದ್ದಾರೆ.