ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಪನಾಮಾ ಪೇಪರ್ಸ್ ಕೇಸ್ ಸುತ್ತಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ.ತೆರಿಗೆ ವಂಚನೆಗೆ ಸಂಬಂಧಿಸಿದ ಪನಾಮಾ ಪೇಪರ್ಸ್ ಹಗರಣದಲ್ಲಿ ಹಲವು ಖ್ಯಾತ ನಾಮರ ಹೆಸರು ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ತಂಡ ಈಗ ಐಶ್ವರ್ಯಾ ರೈಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ.ಈ ಪ್ರಕರಣದಲ್ಲಿ ಐಶ್ವರ್ಯಾ ಮಾವ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹೆಸರೂ ಕೂಡಾ ಕೇಳಿಬಂದಿತ್ತು.