ಐಶ್ವರ್ಯ ರೈ- ಮಣಿರತ್ನಂ ಪೌರಾಣಿಕ ಚಿತ್ರ: ಪೋಸ್ಟರ್ ಬಿಡುಗಡೆ

bengaluru| geethanjali| Last Modified ಮಂಗಳವಾರ, 20 ಜುಲೈ 2021 (16:01 IST)
ಅತ್ಯಂತ ಜನಪ್ರಿಯ ಪೌರಣಿಕ ಕಾದಂಬರಿ ಆಧಾರಿತ ಕಥೆಯನ್ನು ಆಧರಿಸಿ ಮಣಿರತ್ನಂ ನಿರ್ದೇಶಿಸುತ್ತಿರುವ ಪೊನ್ನಿಯಿನ್ ಸೆಲ್ವಂ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಿಗ್ ಬಜೆಟ್ ಚಿತ್ರವನ್ನು ಘೋಷಿಸಿದ್ದಾರೆ.
ಐಶ್ವರ್ಯ ರೈ ತಮ್ಮ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ಪೋಸ್ಟರ್ ಪೋಸ್ಟ್ ಮಾಡಿದ್ದು, ಜೀವನದಲ್ಲಿ ಸುವರ್ಣಯುವ ಇದೀಗ ಆರಂಭವಾಗುತ್ತಿದೆ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ಐಶ್ವರ್ಯ ರೈ ಪೊನ್ನಿಯಿನ್ ಆಗಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ವಿಕ್ರಂ, ಕಾರ್ತಿ, ತ್ರಿಷಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್, ಜಯಮ್ ರವಿ, ಐಶ್ವರ್ಯ ಲಕ್ಷ್ಮಿ ಮುಂತಾದ ಸ್ಟಾರ್ ನಟರ ದಂಡೇ ಈ ಚಿತ್ರದಲ್ಲಿದೆ.ರೋಬೊ, ರೋಬೊ-2 ಚಿತ್ರಗಳನ್ನು ನಿರ್ಮಿಸಿದ್ದ ಲೈಸಾ ಪ್ರೊಡಾಕ್ಷನ್ ಈ ಚಿತ್ರವನ್ನು ನಿರ್ಮಿಸುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :