ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ರಣಬೀರ್ ಕಪೂರ್ ಜತೆಗೆ ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದು ಎಲ್ಲರಿಗೂ ಗೊತ್ತು. ಇದೀಗ ಇನ್ನೊಬ್ಬ ಯುವ ನಟನೊಂದಿಗೆ ರೊಮ್ಯಾನ್ಸ್ ಮಾಡಲಿದ್ದಾರೆ. ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ ಫನ್ನೇ ಖಾನ್ ಚಿತ್ರದಲ್ಲಿ ಐಶ್ವರ್ಯಾ ಅಭಿನಯಿಸುತ್ತಿದ್ದಾರೆ. ಇದೀಗ ಐಶ್ ಜತೆ ರೊಮ್ಯಾನ್ಸ್ ಮಾಡಲಿರುವ ನಟ ಯಾರೆಂದು ಬಹಿರಂಗವಾಗಿದೆ.ತಮಿಳು ನಟ ಮಾಧವನ್ ಜತೆ ಐಶ್ ಜೋಡಿಯಾಗಿ ನಟಿಸಲಿದ್ದಾರೆ. 3