ಮುಂಬೈ: ದೇಶಭಕ್ತಿ, ಭಾರತೀಯ ಸೇನೆಗೆ ಸಹಾಯ ಮಾಡುವ ಕೆಲಸದಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.ನಿನ್ನೆ ನಡೆದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವನ್ನು ಹುರಿದುಂಬಿಸಲು ಲಾರ್ಡ್ಸ್ ಮೈದಾನದಲ್ಲಿ ಉಪಸ್ಥಿತರಿದ್ದ ಅಕ್ಷಯ್ ರಾಷ್ಟ್ರಧ್ವಜ ಬೀಸುತ್ತಿದ್ದರು. ಈ ವೇಳೆ ತಲೆಕೆಳಗಾಗಿ ರಾಷ್ಟ್ರಧ್ವಜ ಹಿಡಿದಿದ್ದು, ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆದರೆ ಆಗ ಅವರಿಗೆ ಫೋಟೋದಲ್ಲಿದ್ದ ತಮ್ಮ ತಪ್ಪು ಗೊತ್ತಿರಲಿಲ್ಲ.ಇದು