ಮುಂಬೈ: ಮೊನ್ನೆಯಷ್ಟೇ ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ರೂ. ಪರಿಹಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈಗ ಮತ್ತೆ 3 ಕೋಟಿ ರೂ. ದೇಣಿಗೆ ನೀಡಿದ್ದಾರೆ.ಈ ಬಾರಿ ಅಕ್ಷಯ್ ದೇಣಿಗೆ ನೀಡಿರುವುದು ಮುಂಬೈ ಮಹಾನಗರ ಪಾಲಿಕೆಗೆ. ಈ ಪರಿಹಾರ ಹಣವನ್ನು ಮಾಸ್ಕ್ ತಯಾರಿಕೆಗೆ ಮತ್ತು ಕೊರೋನಾ ಟೆಸ್ಟ್ ಕಿಟ್ ಖರೀದಿಗೆ ಬಳಸುವುದಾಗಿ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.ಇದಲ್ಲದೆ ಸ್ಥಳೀಯರಿಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು