ಬ್ಯಾಟ್ಮ್ಯಾನ್, ಸೂಪರ್ಮ್ಯಾನ್, ಹೀಮ್ಯಾನ್...ಹೆಸರುಗಳನ್ನು ಕೇಳಿರುತ್ತೀವಿ. ಇದ್ಯಾವುದಿದು ಪ್ಯಾಡ್ಮ್ಯಾನ್? ಇದರ ಬಗ್ಗೆ ಗೊತ್ತಾಗಬೇಕಾದರೆ ಮೊದಲು ಅರುಣಾಚಲಂ ಮುರುಗನಂತಮ್ ಬಗ್ಗೆ ತಿಳಿದುಕೊಳ್ಳಬೇಕು. ತಮಿಳುನಾಡಿನ ಅರುಣಾಚಲಂ ಕೊಯಂಬತ್ತೂರಿನ ಒಬ್ಬ ವರ್ತಕ. ಬಡ ಹೆಣ್ಣುಮಕ್ಕಳಿಗಾಗಿ ಅತ್ಯಂತ ಕಡಿಮೆ ಬೆಲೆಗೆ ಸ್ಯಾನಿಟರಿ ಪ್ಯಾಡ್ಗಳ ತಯಾರಿ ಮೆಷಿನ್ಗಳನ್ನು ತಯಾರಿಸಿದ್ದಾರೆ. ಈಗ ಕಮರ್ಷಿಯಲ್ಲಾಗಿ ಸಿಗುತ್ತಿರುವ ಪ್ಯಾಡ್ಗಳಿಗಿಂತ ಮೂರನೇ ಒಂದು ಬೆಲೆಗೆ ಈ ಪ್ಯಾಡ್ಗಳು ಲಭ್ಯವಾಗುತ್ತಿವೆ. ಅರುಣಾಚಲಂ ತಯಾರಿಸಿದ ಈ ಮಿನಿ ಮಿಷಿನ್ ಈಗಾಗಲೆ ದೇಶದ 23 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.