ದೀಪದ ಹಬ್ಬದ ಈ ಶುಭ ಸಂದರ್ಭದಲ್ಲಿ ನಟಿ ಆಲಿಯಾ ಭಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರಣಬೀರ್ ಕಪೂರ್ ಜೊತೆ ಆಲಿಯಾ ಪ್ರೀತಿಸುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಅವರು ಸಾರ್ವಜನಿಕವಾಗಿ ಆ ಬಗ್ಗೆ ಮಾತನಾಡುವುದು ಕಡಿಮೆ. ಹಾಗಂತ ಕದ್ದು ಮುಚ್ಚಿ ಈ ಜೋಡಿ ಹಕ್ಕಿಗಳು ಓಡಾಡುತ್ತಿಲ್ಲ. ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಅನೇಕ ಫೋಟೋಗಳು ಹರಿದಾಡುತ್ತಿವೆ. ಅದಕ್ಕೆಲ್ಲ ಅವರು ತಲೆ ಕೆಡಿಸಿಕೊಂಡಿಲ್ಲ. ಈಗ ದೀಪಾವಳಿ ಹಬ್ಬದ ಈ ಶುಭ