ಹೈದರಾಬಾದ್: ತ್ರಿಬಲ್ ಆರ್ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ನಡುವೆ ನಾಯಕಿ ಅಲಿಯಾ ಭಟ್ ಚಿತ್ರತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೀಗ ಅವರೇ ಪ್ರತಿಕ್ರಿಯಿಸಿದ್ದಾರೆ.ಸಿನಿಮಾದಲ್ಲಿ ಅಲಿಯಾ ಭಟ್ ಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿಲ್ಲ ಎಂಬ ವಿಚಾರಕ್ಕೆ ಅವರು ಬೇಸರಗೊಂಡಿದ್ದಾರೆ ಎಂಬ ವರದಿಗಳಾಗಿತ್ತು. ಈ ಬಗ್ಗೆ ಅಲಿಯಾ ಇನ್ ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿದ್ದಾರೆ.‘ನಾನು ಇನ್ ಸ್ಟಾಗ್ರಾಂನಲ್ಲಿ ಆರ್ ಆರ್ ಆರ್ ಗೆ ಸಂಬಂಧಿಸಿದ