ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್ ಕರ್ನಾಟಕದ ಮಂಡ್ಯ ಜಿಲ್ಲೆಯ ಗ್ರಾಮವೊಂದಕ್ಕೆ ವಿದ್ಯುತ್ ಒದಗಿಸುವ ಮೂಲಕ ಬಡ ಜನರಿಗೆ ತಮ್ಮ ಸಹಾಯಹಸ್ತ ನೀಡಿದ್ದಾರೆ. ಹೌದು. ನಟಿ ಆಲಿಯಾ ಭಟ್ ಅವರು ಮಂಡ್ಯದ ಕಿಕ್ಕೇರಿ ಗ್ರಾಮದ 40 ಕುಟುಂಬಗಳಿಗೆ ಸೋಲಾರ್ ಲೈಟ್ ಗಳನ್ನು ಒದಗಿಸುವ ಕೆಲಸಕ್ಕೆ ಸಹಾಯ ಮಾಡಿದ್ದಾರೆ. ಎಆರ್ ಓಎಚ್ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್ಗಳನ್ನ ಮರುಬಳಕೆ ಮಾಡಿ ವಿದ್ಯುತ್ ಇಲ್ಲದ ಹಳ್ಳಿಗಳಿಗೆ ಸೋಲಾರ್ ದೀಪವನ್ನು ಒದಗಿಸುವ ಕಾರ್ಯ ಮಾಡುತ್ತಿತ್ತು.