ಮೂರನೇ ಮದುವೆಗೆ ಸಿದ್ಧರಾದ ಅಮೀರ್ ಖಾನ್

ಮುಂಬೈ| Krishnaveni K| Last Modified ಸೋಮವಾರ, 22 ನವೆಂಬರ್ 2021 (09:34 IST)
ಮುಂಬೈ: ಕಿರಣ್ ರಾವ್ ಗೆ ವಿಚ್ಛೇದನ ನೀಡಿರುವ ಬಾಲಿವುಡ್ ನಟ ಅಮೀರ್ ಖಾನ್ ಮೂರನೇ ಮದುವೆಗೆ ಸಿದ್ಧರಾಗಿದ್ದಾರಾ? ಹೀಗೊಂದು ರೂಮರ್ ಹರಡಿದೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿರುವ ಅಮೀರ್ ಖಾನ್ ಮೂರನೇ ಮದುವೆಗೆ ಸಿದ್ಧರಾಗಿರುವ ಸುದ್ದಿ ಬಂದಿದೆ. ಇದೇ ಸಿನಿಮಾದ ಸಹನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.


ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಕಿರಣ್ ರಾವ್ ಮತ್ತು ಮೊದಲ ಪತ್ನಿ ರೀನಾ ದತ್ತರಿಂದ ಮೂವರು ಮಕ್ಕಳ ತಂದೆಯಾಗಿರುವ ಅಮೀರ್ 56 ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಗೆ ಸಿದ್ಧರಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


ಇದರಲ್ಲಿ ಇನ್ನಷ್ಟು ಓದಿ :