ಅಮಿತಾಭ್ ಬಚ್ಚನ್ ಇನ್ನು ನಿವೃತ್ತಿ ಹೊಂದಬೇಕು : ಸಲೀಂ ಖಾನ್ ಅಭಿಪ್ರಾಯ

ಮುಂಬೈ| Ramya kosira| Last Modified ಬುಧವಾರ, 13 ಅಕ್ಟೋಬರ್ 2021 (09:14 IST)
ಅಮಿತಾಭ್ ತಮ್ಮ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದೋ ಅದೆಲ್ಲವನ್ನೂ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅವರಿಗಾಗಿಯೇ ಜೀವನದ ಕೆಲವು ವರ್ಷಗಳನ್ನಾದರೂ ಮೀಸಲಿಡಬೇಕು ಎಂದು ಸಲೀಂ ಖಾನ್ ಹೇಳಿದ್ದಾರೆ.

ಅಮಿತಾಭ್ ಬಚ್ಚನ್ ಬಹಳಷ್ಟು ಸಾಧಿಸಿದ್ದಾರೆ. ಅವರು ಚಿತ್ರರಂಗದಿಂದ ನಿವೃತ್ತಿ ಹೊಂದಬೇಕು ಎಂದು ಬರಹಗಾರ ಸಲೀಂ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಲೀಂ ಹಾಗೂ ಅಮಿತಾಭ್ ಬಚ್ಚನ್ ಸುಮಾರು 10ಕ್ಕೂ ಅಧಿಕ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಮಿತಾಭ್ ತಮ್ಮ ಜೀವನದಲ್ಲಿ ಏನೆಲ್ಲಾ ಸಾಧನೆ ಮಾಡಬಹುದೋ ಅದೆಲ್ಲವನ್ನೂ ಮಾಡಿದ್ದಾರೆ. ಒಬ್ಬ ವ್ಯಕ್ತಿ ಅವರಿಗಾಗಿಯೇ ಜೀವನದ ಕೆಲವು ವರ್ಷಗಳನ್ನಾದರೂ ಮೀಸಲಿಡಬೇಕು. ಅವರು ಈಗಾಗಲೇ ಅದ್ಭುತ ಕೆಲಸಗಳನ್ನು ಚಿತ್ರರಂಗದಲ್ಲಿ ಮಾಡಿದ್ದಾರೆ. ಹಾಗಾಗಿ, ಈಗ ಅವರು ಈ ಓಟದಿಂದ ಹಿಂದೆ ಸರಿಯಬೇಕು, ನಿವೃತ್ತಿ ಹೊಂದಬೇಕು ಎಂದು ಸಲೀಂ ಖಾನ್ ದೈನಿಕ್ ಭಾಸ್ಕರ್ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಿವೃತ್ತಿ ಎಂಬ ವ್ಯವಸ್ಥೆ ಇರುವುದು ಅದಕ್ಕಾಗಿ. ಅಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತನ್ನ ಇಷ್ಟದಂತೆ ಕಳೆಯಬೇಕು. ಜೀವನದ ಮೊದಲ ವರ್ಷಗಳು ಕಲಿಯುವಿಕೆ, ಅಧ್ಯಯನದಲ್ಲಿ ಕಳೆದುಹೋಗುತ್ತದೆ. ನಂತರ ನಿಮಗೆ ಜವಾಬ್ದಾರಿಗಳು ಬರುತ್ತವೆ. ಉದಾಹರಣೆಗೆ, ನನ್ನ ಜೀವನ ಈಗ ಸೀಮಿತವಾಗಿದೆ. ನನ್ನ ಜೊತೆಗೆ ಈಗ ಹೆಜ್ಜೆ ಹಾಕುತ್ತಿರುವವರು ಎಲ್ಲರೂ ಸಿನಿಮೇತರ ಹಿನ್ನೆಲೆಯವರಾಗಿದ್ದಾರೆ ಎಂದು ಸಲೀಂ ಹೇಳಿದ್ದಾರೆ.
 
ಇದರಲ್ಲಿ ಇನ್ನಷ್ಟು ಓದಿ :