ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಆದರೆ ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಮೂಲಗಳು ಹೇಳಿವೆ.ಶೂಟಿಂಗ್ ವೇಳೆ ಹೆಗಲಿಗೆ ಗಾಯಮಾಡಿಕೊಂಡಿದ್ದಾರೆ. ಅವರಿಗೆ ಸಣ್ಣ ಮಟ್ಟಿಗೆ ಎಲುಬಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ತುರ್ತು ಚಿಕಿತ್ಸೆ ಪಡೆಯಲಾಗಿದ್ದು, ಗಾಯದ ಗಂಭೀರತೆ ಬಗ್ಗೆ ಮುಂಬೈಗೆ ಶೂಟಿಂಗ್ ಮುಗಿಸಿ ಬಂದ ಮೇಲೆ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಿ ತಿಳಿದುಕೊಳ್ಳಲಾಗುವುದು ಎಂದು ಚಿತ್ರತಂಡದ ಮೂಲಗಳು