ಮುಂಬೈ: ಇಂಗ್ಲೆಂಡ್ ನಲ್ಲಿ ಮಳೆಯಿಂದಾಗಿ ವಿಶ್ವಕಪ್ ಪಂದ್ಯಗಳು ರದ್ದಾಗುತ್ತಿರುವುದು ಅಭಿಮಾನಿಗಳಲ್ಲಿ ಹತಾಶೆ ಮೂಡಿಸಿದೆ. ಈ ನಡುವೆ ಬಾಲಿವುಡ್ ಬಿಗ್ ಅಮಿತಾಭ್ ಬಚ್ಚನ್ ಅಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ.ಐಸಿಸಿ ವಿಶ್ವಕಪ್ ನಂತಹ ಮಹತ್ವದ ಟೂರ್ನಿಯನ್ನು ಈ ಮಳೆಗಾಲದಲ್ಲಿ ಇಂಗ್ಲೆಂಡ್ ನಂತಹ ದೇಶದಲ್ಲಿ ಆಡಿಸಿ ಮೂರ್ಖತನ ತೋರಿದೆ ಎಂದು ಅಭಿಮಾನಿಯೊಬ್ಬರು ಮಾಡಿದ ಟ್ವೀಟ್ ಗೆ ಅಮಿತಾಭ್ ತಮಾಷೆಯಾಗಿಯೇ ಪ್ರತಿಕ್ರಿಯಿಸಿದ್ದಾರೆ.ಹೌದು ವಿಶ್ವಕಪ್ ಭಾರತಕ್ಕೆ ಶಿಫ್ಟ್ ಆಗಬೇಕು. ನಮಗೆ ಇಲ್ಲಿ ಸೆಖೆ ತಡೆಯಲಾಗುತ್ತಿಲ್ಲ. ಇಲ್ಲಿಗೆ ಮಳೆ ಬರಲಿ