ಅನುಷ್ಕಾ ಶರ್ಮಾ ಪ್ರೆಗ್ನೆನ್ಸಿ ಸುದ್ದಿಗೆ ಪುಷ್ಠಿ ನೀಡಿದೆ ಈ ಘಟನೆ!

ಮುಂಬೈ| Krishnaveni K| Last Modified ಭಾನುವಾರ, 2 ಜೂನ್ 2019 (09:28 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೆಚ್ಚಿನ ಮಡದಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ?

 
ಮದುವೆಯಾದ ತಕ್ಷಣ ಸೆಲೆಬ್ರಿಟಿ ದಂಪತಿ ಬಗ್ಗೆ ಇಂತಹ ಸುದ್ದಿ ಬರುವುದು ಸಹಜ ಎನ್ನುವಂತಾಗಿದೆ. ಆದರೆ ಈ ಬಾರಿ ಅನುಷ್ಕಾ ಬಗ್ಗೆ ಹೀಗೊಂದು ರೂಮರ್ ಹಬ್ಬುವುದಕ್ಕೆ ಕಾರಣವಿದೆ.
 
ಇತ್ತೀಚೆಗೆ ಅನುಷ್ಕಾ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಹೊರಗಡೆ ಹೆಚ್ಚಾಗಿ ಕಾಣಿಸಿಕೊಳ್ಳಲ್ಲ. ಅದೂ ಸಾಲದೆಂಬಂತೆ ಅನುಷ್ಕಾ ಆಸ್ಪತ್ರೆಯೊಂದಕ್ಕೆ ಹೋಗಿ ಹೊರಬರುತ್ತಿರುವ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿವೆ. ಇಷ್ಟೇ ಸಾಕಾಗಿದೆ! ಮತ್ತೆ ಅನುಷ್ಕಾ ಗರ್ಭಿಣಿ ಎನ್ನುವ ಸುದ್ದಿ ಹಬ್ಬಿದೆ.
ಇದರಲ್ಲಿ ಇನ್ನಷ್ಟು ಓದಿ :