ಬಾಲಿವೂಡ್ ಬ್ಯೂಟಿ ಅನುಷ್ಕಾ ಶರ್ಮಾ ಇದೀಗ ಪರಿ ಎಂಬ ಹಾರರ್ ಸಿನೇಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಇದು ಅವರ ಮೊದಲ ಹಾರರ್ ಚಿತ್ರವಾಗಿದೆ. ಪಕ್ಕಾ ರೋಮ್ಯಾಂಟಿಕ್ ಚಿತ್ರಗಳಲ್ಲಿ ಅಭಿನಯಿಸಿದ್ದ ಈ ಚತುರೆ, ಇದೀಗ ಹಾರರ್ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಸಂಚಲನ ಮೂಡಿಸಿದ್ದಾಳೆ. ಈ ಚಿತ್ರದ ಮೊದಲ ಟಿಸರ್ 2017 ರ ಜುಲೈನಲ್ಲಿ ಬಿಡುಗಡೆಯಾಗಿದ್ದು, ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಚಿತ್ರತಂಡ ಫೆಬ್ರುವರಿ 9 ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.