ತುಂಬು ಗರ್ಭಿಣಿಯಾಗಿದ್ದರೂ ಜಿಮ್ ನಲ್ಲಿ ವರ್ಕೌಟ್ ಮಾಡಿದ ಅನುಷ್ಕಾ ಶರ್ಮಾ

ಮುಂಬೈ| Krishnaveni K| Last Modified ಮಂಗಳವಾರ, 5 ಜನವರಿ 2021 (09:50 IST)
ಮುಂಬೈ: ಅನುಷ್ಕಾ ಶರ್ಮಾ ತುಂಬು ಗರ್ಭಿಣಿಯಾಗಿದ್ದರೂ ತಮ್ಮ ಫಿಟ್ನೆಸ್ ನ್ನು ಮಾತ್ರ ಮರೆತಿಲ್ಲ. ಇದೀಗ ಅನುಷ್ಕಾ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
Photo: Anushka Sharma twitter

ಅನುಷ್ಕಾ ಉಬ್ಬು ಹೊಟ್ಟೆಯೊಂದಿಗೇ ಜಿಮ್ ನಲ್ಲಿ ಬೆವರಿಳಿಸುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಅನುಷ್ಕಾ ಶರ್ಮಾ ನವಮಾಸ ತುಂಬಿರುವಾಗಲೂ ಈ ರೀತಿ ವರ್ಕೌಟ್ ಮಾಡುತ್ತಿರುವುದು ನೋಡಿ ಎಲ್ಲರೂ ಬೆರಗಾಗಿದ್ದಾರೆ. ಕೆಲವು ದಿನಗಳ ಹಿಂದೆ ಪತಿ ವಿರಾಟ್ ಕೊಹ್ಲಿ ಸಹಾಯದೊಂದಿಗೆ ಶೀರ್ಷಾಸನ ಮಾಡಿ ಗಮನ ಸೆಳೆದಿದ್ದರು.
ಇದರಲ್ಲಿ ಇನ್ನಷ್ಟು ಓದಿ :