ಆರ್ಯನ್ ಖಾನ್ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ

ಮುಂಬೈ| Krishnaveni K| Last Modified ಬುಧವಾರ, 13 ಅಕ್ಟೋಬರ್ 2021 (20:30 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ನಾಳೆಗೆ ಮುಂದೂಡಿದೆ.
 

ಇಂದು ಜಾಮೀನು ಅರ್ಜಿ ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಹೀಗಾಗಿ ಆರ್ಯನ್ ಮತ್ತೊಂದು ದಿನ ಜೈಲಿನಲ್ಲೇ ಕಳೆಯಬೇಕಾಗಿದೆ.
 
ಇನ್ನೊಂದೆಡೆ ಆರ್ಯನ್ ಮತ್ತು ಸಹಚರರನ್ನು ಬಂಧಿಸಿರುವ ಎನ್ ಸಿಬಿ ಯಾವುದೇ ಕಾರಣಕ್ಕೂ ಆರ್ಯನ್ ಗೆ ಜಾಮೀನು ನೀಡಬಾರದು ಎಂದು ಕೋರ್ಟ್ ಗೆ ಮನವಿ ಮಾಡಿದೆ. ಆರ್ಯನ್ ಪ್ರಭಾವಿ ವ್ಯಕ್ತಿಯಾಗಿದ್ದು, ಆತ ಸಾಕ್ಷ್ಯ ನಾಶಪಡಿಸುವ ಸಾಧ‍್ಯತೆಯಿದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಎನ್ ಸಿಬಿ ಪ್ರತಿಪಾದಿಸಿದೆ.
ಇದರಲ್ಲಿ ಇನ್ನಷ್ಟು ಓದಿ :