ಆರ್ಯನ್ ಡ್ರಗ್ ಕೇಸ್ ಇಫೆಕ್ಟ್: ಶಾರುಖ್ ಖಾನ್ ಜಾಹೀರಾತು ಪ್ರಸಾರ ಬಂದ್ ಮಾಡಿದ ಸಂಸ್ಥೆ

ಮುಂಬೈ| Krishnaveni K| Last Modified ಭಾನುವಾರ, 10 ಅಕ್ಟೋಬರ್ 2021 (08:55 IST)
ಮುಂಬೈ: ಮಗ ಆರ್ಯನ್ ಖಾನ್ ಡ್ರಗ್ ಕೇಸ್ ನಲ್ಲಿ ಬಂಧಿತರಾಗುತ್ತಿದ್ದಂತೇ ನಟ ಶಾರುಖ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
 > ಶಾರುಖ್ ಖಾನ್ ಹಲವು ಜಾಹೀರಾತುಗಳ ರಾಯಭಾರಿಯಾಗಿದ್ದು, ಬೈಜೂಸ್ ಆಪ್ ಎನ್ನುವ ಶಿಕ್ಷಣಕ್ಕೆ ಸಂಬಂಧಿಸಿದ ಆಪ್ ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ.>   ಆದರೆ ಪುತ್ರ ಡ್ರಗ್ ಕೇಸ್ ನಲ್ಲಿ ಅರೆಸ್ಟ್ ಆದ ಬಳಿಕ ಶಾರುಖ್ ರ ಈ ಜಾಹೀರಾತು ಸಾಕಷ್ಟು ಟ್ರೋಲ್ ಗೊಳಗಾಗಿದೆ. ಬೇರೆಯವರ ಮಕ್ಕಳಿಗೆ ಶಿಕ್ಷಣದ ಬಗ್ಗೆ ತಿಳಿಸುವ ಇವರು ತಮ್ಮ ಮಗನಿಗೇ ಒಳ್ಳೆ ಬುದ್ಧಿ ಹೇಳಿಕೊಡಲಿಲ್ಲ ಎಂದು ಕೆಲವರು ನಿರಂತರವಾಗಿ ಟ್ರೋಲ್ ಮಾಡಿದ್ದರು. ಇದರಿಂದಾಗಿ ಈಗ ಆಪ್ ಶಾರುಖ್ ಇರುವ ಜಾಹೀರಾತಿನ ಪ್ರಸಾರವನ್ನೇ ಬಂದ್ ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :