ಸೆಂಟ್ರಲ್ ಜೈಲು ಸೇರಿದ ಆರ್ಯನ್ ಖಾನ್

ಮುಂಬೈ| Krishnaveni K| Last Modified ಶುಕ್ರವಾರ, 8 ಅಕ್ಟೋಬರ್ 2021 (17:32 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಇಂದು ಎನ್ ಸಿಬಿ ಪೊಲೀಸರು ಕೋರ್ಟ್ ಆದೇಶದನ್ವಯ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.  
> ಅದರಂತೆ ಆರ್ಯನ್ ನನ್ನು ಇಂದು ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ಕುಖ್ಯಾತರನ್ನು ಬಂಧಿಸಿದ್ದ ಆರ್ಥರ್ ಜೈಲಿಗೆ ಆರ್ಯನ್ ನನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಗಿದೆ.>   ಇನ್ನು, ಆರ್ಯನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಸದ್ಯಕ್ಕೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.



ಇದರಲ್ಲಿ ಇನ್ನಷ್ಟು ಓದಿ :