ನವದೆಹಲಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಬೇರೆಯದೇ ಹವಾ ಸೃಷ್ಟಿಸಿತ್ತು. ಇದು ಭಾರತದ ಚಿತ್ರರಂಗದ ಇತಿಹಾಸದಲ್ಲೇ ಮೈಲುಗಲ್ಲಾಗಿತ್ತು. ಹಾಗಿದ್ದರೂ ಆಸ್ಕರ್ ಗೆ ಎಂಟ್ರಿ ಪಡೆಯಲು ವಿಫಲವಾಗಿದೆ. ಬಾಹುಬಲಿ 2 ಆಸ್ಕರ್ ಗೆ ಪ್ರವೇಶ ಪಡೆಯುತ್ತದೆ ಎಂದೇ ಅಭಿಮಾನಿಗಳು ನಂಬಿದ್ದರು. ಆದರೆ ಬಾಹುಬಲಿಯನ್ನು ಮೀರಿಸಿ ಅಮಿತ್ ಮಸುರ್ಕರ್ ನಿರ್ದೇಶನದ ನ್ಯೂಟನ್ ಚಿತ್ರ ಭಾರತದಿಂದ ಪ್ರತಿಷ್ಠಿತಿ ಆಸ್ಕರ್ ಪ್ರಶಸ್ತಿಗೆ ಪ್ರವೇಶ ಪಡೆದಿದೆ.ಇದರಿಂದ ನಿರಾಸೆಯಾಗಿದೆಯೇ ಎಂದು ನಿರ್ದೇಶಕ ರಾಜಮೌಳಿಯನ್ನು