ರಣವೀರ್ ಸಿಂಗ್, ವಾಣಿ ಕಪೂರ್ ಜೋಡಿಯಾಗಿ ಅಭಿನಯಿಸಿರುವ ಬಾಲಿವುಡ್ ಸಿನಿಮಾ ಬೇಫಿಕ್ರೆ ಕಲೆಕ್ಷನ್ ಎರಡನೇ ದಿನ ಸದ್ದು ಮಾಡಿದೆ. ಶುಕ್ರವಾರ ಬಿಡುಗಡೆಯಾದ ಈ ಚಿತ್ರ ಮೊದಲ ದಿನ ರೂ.10.36 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ರೂ.11.60 ಕೋಟಿಗೆ ಸೇರಿದೆ. ಎರಡು ದಿನಗಳಲ್ಲಿ ಒಟ್ಟಾರೆ ರು.21.96 ಕೋಟಿ ಕಲೆಕ್ಷನ್ ಆಗಿದೆ. ಈ ಸಿನಿಮಾದಲ್ಲಿ ರಣವೀರ್ ಕಪೂರ್ ಮತ್ತು ವಾಣಿ ಕಪೂರ್ ಲಿಪ್ ಲಾಕ್ ಸನ್ನಿವೇಶಗಳಲ್ಲಿ ಭರ್ಜರಿಯಾಗಿ ಪರ್ಫಾಮೆನ್ಸ್ ನೀಡಿದ್ದಾರೆ.