ಕಿಚ್ಚ ಸುದೀಪ್ ಗೆ ಇಂದು ಬಾಲಿವುಡ್ ಪರೀಕ್ಷೆ

ಬೆಂಗಳೂರು| Krishnaveni K| Last Modified ಶುಕ್ರವಾರ, 20 ಡಿಸೆಂಬರ್ 2019 (08:31 IST)
ಬೆಂಗಳೂರು: ಸಲ್ಮಾನ್ ಖಾನ್ ನಾಯಕರಾಗಿ, ಕಿಚ್ಚ ಸುದೀಪ್ ವಿಲನ್ ಆಗಿ ಅಭಿನಯಿಸಿರುವ ಸಿನಿಮಾ ಇಂದು ದೇಶದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

 
ಸಲ್ಮಾನ್ ಖಾನ್ ಅಭಿನಯದ ಸಿನಿಮಾವೊಂದು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಡಬ್ ಆಗುತ್ತಿದ್ದು, ಕನ್ನಡದಲ್ಲೇ ಸಲ್ಮಾನ್ ಧ್ವನಿ ನೀಡಿರುವುದು ವಿಶೇಷವಾಗಿದೆ. ಅದರ ಜತೆಗೆ ಕಿಚ್ಚ-ಸಲ್ಮಾನ್ ಶರ್ಟ್ ಲೆಸ್ ಫೈಟ್ ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲವಿದೆ.
 
ಕನ್ನಡದವರೇ ಆದ ಪ್ರಭುದೇವ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಭರ್ಜರಿ ಹಾಡು, ಡ್ಯಾನ್ಸ್ ಇದೆ. ಹೀಗಾಗಿ ಹಿಂದಿ ಡಬ್ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಹೇಗೆ ನೋಡುತ್ತಾರೆ ಎಂದು ಕಾದುನೋಡಬೇಕಿದೆ. ಅಷ್ಟೇ ಅಲ್ಲದೆ, ಕಿಚ್ಚ ಸುದೀಪ್ ಗೂ ಇದು ಒಂಥರಾ ಬಾಲಿವುಡ್ ಪರೀಕ್ಷೆಯೇ. ಅದರಲ್ಲಿ ಅವರು ಎಷ್ಟು ಅಂಕ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :