Widgets Magazine

ದಂಗಲ್ ನಟಿ ಜೈರಾವಾಸಿಂ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್

ನವದೆಹಲಿ| Hanumanthu.P| Last Modified ಸೋಮವಾರ, 11 ಡಿಸೆಂಬರ್ 2017 (19:02 IST)
ದಂಗಲ್‌ ಸಿನಿಮಾ ನಟಿ ಜೈರಾವಾಸಿಂ ಅವರಿಗೆ ಲೈಂಗಿಕ ಕಿರಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಪತ್ನಿ ಪ್ರತಿಕ್ರಿಯೆ ನೀಡಿದ್ದು, ಜೈರಾವಾಸಿಂ ಅವರು ತಪ್ಪು ಗ್ರಹಿಸಿಕೊಂಡು ದೂರು ನೀಡಿದ್ದಾರೆ. ನನ್ನ ಪತಿ ನೀಡುವವರಲ್ಲ ಎಂದು ಹೇಳಿದ್ದಾರೆ.

ನವದೆಹಲಿ- ಮುಂಬಯಿ ವಿಸ್ತಾರಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನಟಿ ಜೈರಾವಾಸಿಂ ಆರೋಪಿಸಿದ್ದರು. ಈ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಕೂಡ ಬಂಧಿಸಲಾಗಿದೆ.

ಈ ನಡುವೆ ಆರೋಪಿ ಪತ್ನಿ ಪ್ರತಿಕ್ರಿಯೆ ನೀಡಿ, ದಣಿದು ನಿದ್ದೆ ಹೋಗಿದ್ದ ಸಂದರ್ಭದಲ್ಲಿ ಆರ್ಮ್ ರೆಸ್ಟ್ ಮೇಲೆ ಕಾಲು ಚಾಚಿಕೊಂಡು ಮಲಗಿದ್ದಾರೆ. ಆದರೆ, ತಪ್ಪು ಗ್ರಹಿಕೆಯಿಂದ ನಟಿ ಈ ರೀತಿ ಆರೋಪ ಮಾಡಿರಬಹುದು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :